
“ಬಲರಾಮನ ದಿನಗಳು” ಸಿನಿಮಾ ರೌಡಿಯೊಬ್ಬನ ಕತೆಯಲ್ಲ, ದೇಶ ಕಾದ ಕರ್ನಲ್ ದೇವಯ್ಯನವರ ನೋವಿನ ಕತೆ. ಕರ್ನಲ್ ದೇವಯ್ಯನಾಗಿ ನಟ ಅವಿನಾಶ್ ಅವರ ಅಭಿನಯ ಮನೋಜ್ಞ. ಈ ಸಿನಿಮಾ ಕರ್ನಲ್ ದೇವಯ್ಯನವರ ಮಗಳು ರೇವತಿ ದೇವಯ್ಯ ಅವರ ಕತೆ. ಕರ್ನಲ್ ದೇವಯ್ಯನವರ ಮೊಮ್ಮಗನ ಕತೆ. ಅಪ್ಪು ಅಣ್ಣನ ಜೊತೆ ನಾಯಕಿಯಾಗಿ ಅಭಿನಯಿಸಿದ್ದ ನಟಿ ಪ್ರಿಯಾ ಆನಂದ್ ಅವರ ನಟನೆ, ಗ್ಲಾಮರ್ ಸೂಪರ್ ಆಗಿದೆ. ಆ ಮೊಮ್ಮಗನ ಪಾತ್ರದಲ್ಲಿ ಅಭಿನಯಿಸಿರುವ ಮಗುವನ್ನು ಚಿತ್ರದ ಅಂತ್ಯದ ದೃಶ್ಯದಲ್ಲಿ ನೋಡಿದಾಗ ಪ್ರೇಕ್ಷಕರ ಕಣ್ಣಲ್ಲಿ ನೀರು, ಹೃದಯದಲ್ಲಿ ನೋವಿನ ಭಾವ ಆವರಿಸುತ್ತದೆ. ಈ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಮತ್ತು ನಟಿಯ ಕೆಮಿಸ್ಟ್ರಿ ಸಖತ್ತಾಗಿ ವರ್ಕ್ ಔಟ್ ಆಗಿದೆ. ಶುರು ಶುರು ಹಾಡು ಹಾಡಿರುವ ಗಾಯಕ ಸಂಜಿತ್ ಹೆಗ್ಡೆ ನಿಜಕ್ಕೂ ಬಾಲಗಂಧರ್ವನೇ ಸರಿ. ಇದರ ಸಾಹಿತ್ಯ ಯಾರು ಬರೆದದ್ದು ಎಂದು ನೋಡಿದರೆ ನನ್ನ ಸಾಹಿತ್ಯ, ಸಿನಿಮಾ ಗುರು ಜಯಂತ ಕಾಯ್ಕಿಣಿ ಸರ್. ಸಂಗೀತ ಮತ್ತು ಬಿಜಿಎಂ ಅಂತೂ ಅಧ್ಭುತವಾಗಿದೆ. “ಆ ದಿನಗಳು” ಸಿನಿಮಾದಷ್ಟು ಚೆನ್ನಾಗಿಲ್ಲ ಅಂತ ಹೇಳಲೇಬೇಡಿ. ಅದರ ಖದರ್ರೇ ಬೇರೆ ಇದರ ಖದರ್ರೇ ಬೇರೆ. ಪಬ್ಲಿಕ್ ರಿವ್ಯೂ, ಆಡಿಯನ್ಸ್ ರಿವ್ಯೂ ಅಂತೆಲ್ಲಾ ಕಾಯಬೇಡಿ. ನಾನು ಆಡಿಯನ್ ಅಲ್ವ? ನಾನು ಪಬ್ಲಿಕ್ ಅಲ್ವ? ಇದು ಕ್ಲಾಸ್ ಅಂಡ್ ಮಾಸ್ ಸಿನಿಮಾ…
- ಗುಬ್ಬಚ್ಚಿ ಸತೀಶ್.
