ಲವಲವಿಕೆಯ ಸಿನಿಮಾ… “ಪ್ರೇಮದ ಊರಲಿ”

“ಪ್ರೇಮದ ಊರಲಿ” ಸಿನಿಮಾ ಬಹಳ ಲವಲವಿಕೆಯ ಸಿನಿಮಾ…

ಚಲನಚಿತ್ರ ಅಂದರೆ ಅದು ನಿರ್ದೇಶಕನ ಮಾಧ್ಯಮ ಮಾತ್ರ ಅಂತ ನಿರ್ದೇಶಕ ಮನೋಜ್ ಕುಮಾರ್ ತಮ್ಮ ತಂಡದೊಂದಿಗೆ ಪ್ರೂವ್ ಮಾಡಿದ್ದಾರೆ… ಬರಪಿಡೀತ ಒಂದು ಊರಲ್ಲಿ ಬಹಳ ಕಾಲದ ನಂತರ ಸಮೃದ್ಧವಾಗಿ ಮಳೆ ಬಂದರೆ ಏನಾಗುತ್ತೋ ಆ ಸಂತಸ ಚಂದನವನದ ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಆಗುತ್ತಿದೆ. ಬಹುಮುಖ್ಯವಾಗಿ ಚಿತ್ರ ನೋಡುವಾಗ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಿರುವುದೇ ಗೆಲುವಿನ ಮುಖ್ಯ ಕಾರಣ ಎಂದು ಹೇಳಬಹುದು.

ಹಿರಿಯ ನಟ ರಂಗಾಯಣ ರಘು ಅವರ, ನಟ ಶ್ರೀರಾಮ್ ಮತ್ತು ಆ ಇಬ್ಬರು ನಾಯಕಿಯರ ನಟನೆ ಮೋಡಿ ಮಾಡುವಷ್ಟು ಚೆನ್ನಾಗಿದೆ.

ನಿರ್ದೇಶಕ ಮನೋಜ್ ಕುಮಾರ್ ಮತ್ತು ಟೀಮಿಗೆ ಒಂದು ಹ್ಯಾಟ್ಸಾಫ್ ಹೇಳುತ್ತಲೇ ಈ ಚಿತ್ರಕ್ಕೆ ನನ್ನ ರೇಟಿಂಗ್ 5ಕ್ಕೆ 4ಸ್ಟಾರುಗಳು ಎಂದು ತಿಳಿಸಲು ಹರ್ಷಿಸುತ್ತೇನೆ…

  • ಗುಬ್ಬಚ್ಚಿ ಸತೀಶ್‌, ಸಂಪಾದಕರು, ಹಾಯ್‌ ತುಮಕೂರು.

Leave a Comment

Your email address will not be published. Required fields are marked *

Scroll to Top