ರಕ್ಕಸಪುರದೋಳ್‌ ಸಿನಿಮಾ ಮಿಮರ್ಶೆ: ರಕ್ಕಸಪುರದಲ್ಲಿ ಇಬ್ಬರು ರಾಕ್ಷಸರು.

ಇಂದು ಬಿಡುಗಡೆಯಾಗಿರುವ “ರಕ್ಕಸಪುರದೊಳ್”‌ ಸಿನಿಮಾ ಸೈಕಾಲಾಜಿಕಲ್‌ ಥ್ರಿಲರ್‌ ಸಿನಿಮಾವಾಗಿದ್ದು ನೋಡುಗರನ್ನು ಆರಂಭದಿಂದ ಅಂತ್ಯದವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ರಕ್ಕಸಪುರದಲ್ಲಿ ಇರುವ ಇಬ್ಬರು ರಾಕ್ಷಸರಲ್ಲಿ ಯಾರೂ ಕಡೆಗೆ ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಸಿನಿಮಾ ಅಂತ್ಯದ ಫೈಟ್‌ ಬಹಳ ಜಬರ್ದಸ್ತಾಗಿದೆ.

ಪೋಲೀಸ್‌ ಅಧಿಕಾರಿಯಾಗಿ ಅಭಿನಯಿಸಿರುವ ನಟ ರಾಜ್‌ ಬಿ ಶೆಟ್ಟಿಯವರು ಆರೋಗ್ಯ ಸಮಸ್ಯೆಗೆ ಒಳಗಾಗಿ ತದನಂತರ ಕ್ರೈಂ ರೇಟ್‌ ಕಡಿಮೆ ಇರುವ ರಕ್ಕಸಪುರಕ್ಕೆ ಬಂದು ಇಲ್ಲಿ ನಡೆಯುವ ಸರಣಿ ಕೊಲೆಗಳಿಗೆ ಕಾರಣ ಯಾರು ಎಂದು ಕಂಡುಹಿಡಿಯುವುದೇ ಈ ಚಿತ್ರದ ಕಥಾವಸ್ತು. ನಟ ರಾಜ್‌ ಬಿ ಶೆಟ್ಟಿಯವರೊಳಗಿರುವ ನಟನೊಳಗಿನ ರಾಕ್ಷಸನ ಮತ್ತೊಂದು ರೂಪ ಇಲ್ಲಿ ದರ್ಶನವಾಗಿದೆ. ಹೊಸ ನಟನೊಬ್ಬನ ಆಗಮನವೂ ಆಗಿದೆ. ನಟ ಬಿ. ಸುರೇಶ್‌ ಮತ್ತು ಇತರರ ಅಭಿನಯ ಚೆನ್ನಾಗಿದೆ. ಸಿನಿಮಾದಲ್ಲಿ ಉತ್ತಮವಾದ ಕಾಮಿಡಿಯೂ ಇದೆ.

ಸಾಹಸ ನಿರ್ದೇಶಕ ರವಿಮರ್ಮ ಅವರ ಕನಸಿನ ನಿರ್ಮಾಣಕ್ಕೆ ನಿರ್ದೇಶಕ ರವಿ ಸಾರಂಗ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ಸೊಬಗಿದೆ. ಚಿತ್ರದ ಎಲ್ಲಾ ತಂತ್ರಜ್ಞರ ಕೆಲಸವು ಶ್ರದ್ಧೆಯಿಂದ ಕೂಡಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಸಂಗೀತದಲ್ಲಿ ನಿರ್ದೇಶಕ ಪ್ರೇಮ್‌ ಅವರು ಹಾಡಿರುವ ʼಸಿದ್ಧಯ್ಯ ಸ್ವಾಮಿ ಬನ್ನಿʼ ಮತ್ತು ಗಾಯಕ ವಿಜಯ ಪ್ರಕಾಶ್‌ ಅವರು ಹಾಡಿರುವ ʼನೀನಾ…ʼ ಹಾಡು ಬಹಳ ಇಷ್ಟವಾಗುತ್ತದೆ.

ಕ್ರೈಂ, ಥ್ರಿಲ್ಲರ್‌, ಸಸ್ಪೆನ್ಸ್‌, ಮರ್ಡರ್‌ ಮಿಸ್ಟ್ರಿ, ಸೈಕಲಾಜಿಕಲ್‌ ಥ್ರಿಲರ್‌ ಸಿನಿಮಾಗಳನ್ನು ಇಷ್ಟಪಡುವ ಎಲ್ಲಾ ಕನ್ನಡದ ಚಲನಚಿತ್ರ ಪ್ರೇಮಿಗಳು ಧಾರಾಳವಾಗಿ ಈ ಸಿನಿಮಾವನ್ನು ಒಮ್ಮೆ ನೋಡಬಹುದಾಗಿದೆ.

  • ಗುಬ್ಬಚ್ಚಿ ಸತೀಶ್‌, 9986692342

Leave a Comment

Your email address will not be published. Required fields are marked *

Scroll to Top