ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ…

“‎ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ” ಪುಸ್ತಕದ ಲೇಖಕರು ಪ್ರೊ.ಎಂ.ಜಿ.ರಂಗಸ್ವಾಮಿಯವರು. ‎ಇವರು ಹಿರಿಯೂರು ತಾಲ್ಲೂಕಿನವರಾಗಿದ್ದು, ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

‎‎ಇನ್ನು ಪುಸ್ತಕದ ವಿಷಯಕ್ಕೆ ಬರುವುದಾದರೆ, ಈ ಪುಸ್ತಕವು ವಾಣಿ ವಿಲಾಸ ಸಾಗರ ನಿರ್ಮಾಣ ಹಂತದಲ್ಲಿನ ಹಲವಾರು ವಿಸ್ಮಯ, ಕುತೂಹಲ ಕಥಾನಕವನ್ನು ಒಳಗೊಂಡಿದೆ. ‎ಮಾರಿಕಣಿವೆಯ ಡ್ಯಾಂ ಕಟ್ಟಿಸಿದ್ದು ಯಾರು? ಕಟ್ಟಿಸಲು ಕಾರಣವೇನು? ಡ್ಯಾಂ ಅನ್ನು ಅದೇ ಜಾಗದಲ್ಲಿ ಏಕೆ ಕಟ್ಟಲಾಯಿತು? ಡ್ಯಾಂ ಕಟ್ಟಿದ್ದರಿಂದ ಯಾರಿಗೆ ಅನುಕೂಲವಾಯಿತು, ಯಾರಿಗೆ ತೊಂದರೆಯಾಯಿತು?‎ಡ್ಯಾಂ ಕಟ್ಟಲು ಬಳಸಿದ ವಸ್ತುಗಳ ವಿವರ, ಡ್ಯಾಂ ಕಟ್ಟಲು ಬಂದಂತಹ ಇಂಜಿನಿಯರ್ಗಳು, ಅಧಿಕಾರಿಗಳ ವಿವರ ‎ಹಾಗು ಅಲ್ಲಿನ ಕ್ಷೇತ್ರ ದೇವತೆ ಮಾರಮ್ಮನ ಬಗ್ಗೆ ಮಾಹಿತಿ, ಮಹಾರಾಣಿಯ ಬಗ್ಗೆ ಮಾಹಿತಿ ಒಳಗೊಂಡಿದೆ. ‎ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದಲ್ಲಿ ಇರುವ ಡ್ಯಾಂ ನಿರ್ಮಾಣ ಹಂತದ ವಿವಿಧ ಚಿತ್ರಗಳು ಕಣ್ಮನ ಸೆಳೆಯುತ್ತವೆ.

‎‎ಲೇಖಕರು ಜನಪದ ಸೊಗಡನ್ನು ಅರಿತವರಾದರಿಂದ ಕೆಲವೊಂದು ಕಡೆ ಜನಪದ ಸಾಲುಗಳು ಕಾಣ ಸಿಗುತ್ತವೆ. ‎ಉದಾಹರಣೆಗೆ

ʼಮಾರೀಯ ಕಣಿವೆಯ ಮಾರಾಜ ಕಟ್ಟಿಸಿದ

ಮೂವತ್ಮೂರಳ್ಳಿ ಮುಳುಗ್ಯಾವು

‎ಅಂಬುದ ಕೇಳಿ ಆಕೆ ಕಣಿಮೆವ್ವ ಅಳುತಾಳೆ.ʼ

‎‎ಬಹಳ ವಿಷಯ ಸಂಗ್ರಹಿಸಿ, ಬಹಳ ಶ್ರದ್ಧೆಯಿಂದ ಲೇಖಕರು ಈ ಪುಸ್ತಕವನ್ನು ಬರೆದು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ‎ಚಿತ್ರದುರ್ಗ ಜಿಲ್ಲೆಯಲ್ಲಿ ವಾಸಿಸುತ್ತಿರುವವರು ಖಂಡಿತವಾಗಿಯೂ ಈ ಪುಸ್ತಕವನ್ನು ಓದಲೇಬೇಕು. ಕರುನಾಡಿನ ಇತಿಹಾಸದ ಆಸಕ್ತರಿಗೆ ಈ ಪುಸ್ತಕ ಬಹಳ ಮಾಹಿತಿಯನ್ನೊಳಗೊಂಡ ಕಣಜವಾಗಿದೆ. ‎ನಿಮಗೆ ತಿಳಿಯದ ಬಹಳಷ್ಟು ಮಾಹಿತಿ ಈ ಪುಸ್ತಕದಲ್ಲಿದೆ. ‎ನಿಮ್ಮೂರಿನ ಪುಸ್ತಕ ಮಳಿಗೆಯಲ್ಲಿ ಈ ಪುಸ್ತಕವನ್ನು ಖರೀದಿಸಿ. ‎ಒಂದು ವೇಳೆ ಅಲ್ಲಿ ಈ ಪುಸ್ತಕ ಸಿಗದೆ ಇದ್ದರೆ, ಈ ವಾಟ್ಸಪ್ ಸಂಖ್ಯೆಗೆ 93428 08865 ಮೆಸೇಜ್ ಮಾಡಿ, ನಾವು ನಿಮಗೆ ಲೇಖಕರ ನಂಬರ್ ಕಳಿಸುತ್ತೇವೆ, ನೀವು ಲೇಖಕರಿಂದ ನೇರವಾಗಿ ಪುಸ್ತಕವನ್ನು ತರಿಸಿಕೊಳ್ಳಿ.

  • ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.

Leave a Comment

Your email address will not be published. Required fields are marked *

Scroll to Top