
ಪ್ರಿಯ ಸುದೀಪಣ್ಣ, ನಿಮಗೊಂದು ದೊಡ್ಡ ಥ್ಯಾಂಕ್ಸ್. ನಿರ್ದೇಶಕ ವಿಜಯ್ ಕಾರ್ತೀಕೇಯ ಅವರಿಗೂ ಧನ್ಯವಾದಗಳು. ನೀವು ನಿಮ್ಮ ತಂಡ ಒಂದೊಳ್ಳೆಯ ಸಿನಿಮಾಟಿಕ್ ಅನುಭವ ನೀಡುವ ಸಿನಿಮಾ ನೀಡಿದ್ದೀರಿ. ಮ್ಯಾಕ್ಸ್, ಮಾರ್ಕ್ ನಂತರ ಮುಂದಿನ ವರ್ಷ ಡಿಸೆಂಬರ್ 25ಕ್ಕೇ ಇದೇ ಸರಣಿಯ ರೀತಿಯ ಇನ್ನೊಂದು ಸಿನಿಮಾ ದಯವಿಟ್ಟು ಮಾಡಿ. ಇಂದು ಗಮನಿಸಿದ ಹಾಗೆ ಮೂರು ನಾಲ್ಕು ತಿಂಗಳುಗಳ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಬಹಳ ಹಿರಿಯರವರೆಗೆ ಈ ಸಿನಿಮಾ ನೋಡಲು ಬರುತ್ತಿದ್ದಾರೆ ಅಂದರೆ ಇವತ್ತಿನ ಸಮಾಜದಲ್ಲಿ ಏನೇ ಸಮಸ್ಯೆಯಾದರೂ ನಿಮ್ಮ ಪಾತ್ರ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಅಜಯ್ ಮಾರ್ಕಂಡೇಯ ರೀತಿಯ ಒಬ್ಬ ಆರಕ್ಷಕ ನಮ್ಮನೆಲ್ಲಾ ರಕ್ಷಿಸುತ್ತಾನೆ ಎಂಬ ನಂಬಿಕೆಯೇ ಆಗಿದೆ. ನೀವು ಈ ಸಿನಿಮಾದಿಂದಷ್ಟೇ ಅಲ್ಲ ಬಿಗ್ ಬಾಸಿನ ಮೂಲಕವೂ ಅಭಿಮಾನಿಗಳನ್ನು ಗಳಿಸಿರುವುದು ಈ ಚಿತ್ರಕ್ಕೆ ಯುವಕ ಯುವತಿಯರು ದಂಡುದಂಡಾಗಿ ಬಂದು ಸಿನಿಮಾ ವೀಕ್ಷಿಸುತ್ತಿರುವುದು ಕಾರಣವಾದರೂ ಅವರು ನೀವು ಒಂದೊಳ್ಳೆ ಮೆಸೇಜ್ ಕೊಡ್ತೀರಿ ಅಂತಾನೇ ಬಂದಿರುತ್ತಾರೆ ಎಂಬುದಂತೂ ಸದ್ಯ. ನಾನಂತೂ ಸಿನಿಮಾದ ಕಡೆಯಲ್ಲಿ ಬಹಳ ಎಮೋಷನಲ್ ಆಗಿ ಬಿಟ್ಟೆ. ಮಕ್ಕಳಿಗೆ ಮೊಬೈಲ್ ಕೊಡಬಾರದು ಎನ್ನುವರು ಕೂಡ ಇನ್ನು ಮುಂದೆ ಮಕ್ಕಳು ಮೊಬೈಲ್ ಎಷ್ಟು ಬೇಕೋ ಅಷ್ಟು ಉಪಯೋಗಿಸಲಿ ಎನ್ನುವುದಂತೂ ಸತ್ಯ. ಇನ್ನು, ಈ ಸಿನಿಮಾ ತಮಿಳಿನ ಸಿನಿಮಾದ ರೀತಿ ಎನ್ನುವವರಿಗೊಂದು ಮಾತು. ನಮ್ಮ ಚಿತ್ರರಂಗ ಮೊದಲಿನಿಂದಲೂ ಮದರಾಸು ಚಲನಚಿತ್ರರಂಗವನ್ನು ಅವಲಂಬಿಸಿದೆ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡ ವಿಕ್ರಮ್, ಖೈದಿ, ಜೈಲರ್, ಕೂಲಿ ರೀತಿಯ ಸಿನಿಮಾಗಳು ಇಡೀ ಚಿತ್ರರಂಗವೇ ತಮ್ಮತ್ತ ತಿರುಗುವಂತೆ ಮಾಡಿದ್ದವು. ಇದನ್ನರಿತ ನೀವು ಕನ್ನಡದಿಂದಲೇ ಈ ಪ್ಯಾನ್ ಇಂಡಿಯಾ ಸಿನಿಮಾ ನೀಡಿರುವುದು ನನಗಂತೂ ಸಂತಸ ತಂದಿದೆ. ಆರಂಭದಿಂದ ಅಂತ್ಯದವರೆಗೂ ಒಂದೇ ಉಸಿರಿಗೆ ನೋಡಿಸಿಕೊಳ್ಳುವ ಈ ಸಿನಿಮಾ ಒಂಥಾರ ಜೇಮ್ಸ್ ಬಾಂಡ್ ಸರಣಿಯ ಸಿನಿಮಾವಿದ್ದಂತೆ, ಇದು ಮುಂದುವರಿಯಲಿ ಎಂದು ಆಶಿಸುತ್ತೇನೆ… ಹ್ಯಾಟ್ಸ್ ಆಫ್ ಟು ಯು…
- ಗುಬ್ಬಚ್ಚಿ ಸತೀಶ್.

Excellent article 👌🏻