
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ನಿರ್ದೇಶಕ ಪ್ರಕಾಶ್ ವೀರ್ ಅವರ ನಿರ್ದೇಶನದ “ದಿ ಡೆವಿಲ್” ಸಿನಿಮಾದಲ್ಲಿ ನಟ ದರ್ಶನ್ ಅವರೊಳಗಿರುವ ಕಲಾವಿದನ ದರ್ಶನವೇ ಆಗಿದೆ. ಜೊತೆಗೆ ಪೊಲಿಟಿಕಲ್ ಥ್ರಿಲರ್ ಆಗಿಯೂ ಕೂಡ ಈ ಸಿನಿಮಾ ಗಮನ ಸೆಳೆಯುತ್ತದೆ.
ಕೃಷ್ಣ ಮತ್ತು ಧನುಷ್ ಎಂಬ ಎರಡು ಪಾತ್ರಗಳ ಮೂಲಕ ನಟ ದರ್ಶನ್ ಅವರ ನಟನೆಯ “ಡೆವಿಲ್”ನ ವಿರಾಟ ರೂಪದ ದರ್ಶನ ಈ ಸಿನಿಮಾದಲ್ಲಿ ಆಗಿದೆ ಎಂದೇ ಹೇಳಬಹುದು. ಚಿತ್ರದ ಸಂಭಾಷಣೆ, ಹಿನ್ನಲೆ ಸಂಗೀತ ಮತ್ತು ನಟ ದರ್ಶನ್ ಅಂಬರೀಶ್, ವಿಷ್ಣು ದಾದಾ ಮತ್ತು ಅಣ್ಣಾವ್ರಂತೆ ಅಭಿನಯಿಸಿರುವುದು ಚಿತ್ರದ ಹೈಲೈಟ್.

ಇದ್ರೆ ನೆಮ್ದಿಯಾಗಿರ್ಬೇಕ್, ಅಲಹೊಮೋರ – ದಿ ಟ್ರು ಎಂಪರರ್ ಹಾಡುಗಳು ಮತ್ತು ಸಿನಿಮಾದ ಸಾಹಸ ಒಂದೊಳ್ಳೆ ಸಿನಿಮಾಟಿಕ್ ಅನುಭವವನ್ನು ನೀಡುತ್ತವೆ.
ತಮಿಳು, ತೆಲುಗು, ಬಾಲಿವುಡ್ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಾಗಿ ಕಂಡುಬರುವ ಪೊಲಿಟಿಕಲ್ ಥ್ರಿಲ್ಲರಗಳ ಜಾನರಿಗೆ ಈ ಸಿನಿಮಾ ಸೇರಿದ್ದು ಕನ್ನಡದ ಪ್ರೇಕ್ಷಕರಿಗೆ ಒಂದು ಹೊಸ ಅನುಭವವನ್ನೇ ನೀಡುತ್ತದೆ.
ನಟರಾದ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ನಟಿ ರಚನಾ ರೈ, ಗಿಲ್ಲಿ ನಟ, ಹುಲಿ ಕಾರ್ತಿಕ್ ಬಹಳ ಆಪ್ತವಾಗಿ ಅಭಿನಯಿಸಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ಕುತೂಹಲದಿಂದ ನೋಡಿಸಿಕೊಂಡು ಕನ್ನಡ ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆಯ ಅನುಭವ ನೀಡಿದರೆ, ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ ಎಂದೇ ಹೇಳಬೇಕು. ನಟ ದರ್ಶನ್, ನಿರ್ದೇಶಕ ಪ್ರಕಾಶ್ ವೀರ್ ಮತ್ತು ತಂಡಕ್ಕೆ ಒಂದೊಳ್ಳೆಯ ಸಿನಿಮಾ ಕೊಟ್ಟದ್ದಕ್ಕೆ ಪ್ರೇಕ್ಷಕ ಧನ್ಯವಾದಗಳನ್ನು ಹೇಳಬೇಕು.
- ಗುಬ್ಬಚ್ಚಿ ಸತೀಶ್.
