ಮಾದರಿಯಾಗು

ಹೇ ವಿಕಲಾಂಗ ಹೇಗೆ ಸಹಿಸಲಿ
ನಿನ್ನ ನರಳಾಟವ ಕಂಡು ಕಣ್ಣಾರೆ
ಎಲ್ಲ ಜೀವಿಗಳಂತೆ ನಿನಗೂ ಉಸಿರಿದೆ
ಸಕಲರಂತೆ ನಿನಗೂ ಎಲ್ಲ ಹಕ್ಕಿದೆ
ವಿಕಲರೆಂಬ ಚಿಂತೆ ನೀನು ಮರೆಯಬೇಕಿದೆ
ನಾಲ್ಕು ಗೋಡೆಗಳ ನಡುವೆ
ನೀನೇಕೆ ನರಳುತ್ತಿರುವೆ
ಸ್ವಾವಲಂಬನೆಯ ಜೀವನ ನಿನಗಿದೆ
ಸ್ವತಂತ್ರದಿ ನೀ ನಡೆದಾಡು
ಕ್ರೀಡಾ ಕ್ಷೇತ್ರದಿ ಮೆರೆದಾಡು
ಸಿನಿಮಾ ಕ್ಷೇತ್ರದಿ ಮೆರೆದಾಡು
ಸಾಹಿತ್ಯ ಕ್ಷೇತ್ರದಿ ಬರೆದಿಡು
ಸಮಾನತೆಯಲಿ ಸಾಧಿಸಲು ನೀ ಹೋರಾಡು
ಸಾಧನೆಯಲಿ ನಿನಗ್ಯಾರು ಸಮಾನರು
ಸಕಲರು ನಿನ್ನ ಮುಂದೆ ನಿಲ್ಲರು
ಸಾಧನೆಯಲಿ ನೀ ಮುಂದಾಗು
ಮುಂಬರುವ ಪೀಳಿಗೆಗೆ ನೀನೆ ಮಾದರಿಯಾಗು

  • ಪ್ರಕಾಶ್ ಆರ್, ತುಮಕೂರು
    ಅಮೃತ ಹಸ್ತ, ತುಮಕೂರು ಡಿಸ್ಟ್ರಿಕ್ಟ್ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ
    ಸಂಸ್ಥಾಪಕರು ಮತ್ತು ಅಧ್ಯಕ್ಷರು.

Leave a Comment

Your email address will not be published. Required fields are marked *

Scroll to Top