ಕಳಕಳಿ

ಚಿತ್ರ ಕೃಪೆ: pexels

ಸಿಗ್ನಲ್ ಬಿಡಲು ಕೆಲವೇ ಕ್ಷಣಗಳಿದ್ದವು ನಾನು ಬಂದು ಗಾಡಿ ನಿಲ್ಲಿಸಿ, ಸುಮ್ಮನೆ ಆ ಕಡೆ ತಿರುಗಿದೆ. ನನ್ನ ಪಕ್ಕದಿಂದ ಮೂರನೇ ಸಾಲಿನಲ್ಲಿ ಚೂಡಿದಾರ್ ತೊಟ್ಟ ಒಂದು ಹುಡುಗಿ ಸಿಗ್ನಲ್ ಬಿಡುವುದಕ್ಕಾಗಿ ಕಾಯುತ್ತಾ ನಿಂತಿದ್ದಳು. ಅವಳ ದುಪ್ಪಟ್ಟ, ಅವಳ ಗಾಡಿಯ ಚಕ್ರದವರೆಗೂ ಬಂದು ನಿಂತಿತ್ತು. ಅವಳು ಅದನ್ನು ಗಮನಿಸಿಲ್ಲವೆಂಬುದು ನನ್ನ ಗಮನಕ್ಕೆ ಬಂತು. ಹೇಳಲೆಂದು ಹಾರ್ನ್ ಮಾಡಿದೆ, ಅಷ್ಟರಲ್ಲಿ ಸಿಗ್ನಲ್ ಬಿಟ್ಟಿತು. ಅವಳು ಹೊರಟೇ ಹೋದಳು. ಮುಂದೆ ಏನಾಯ್ತೋ ತಿಳಿಯಲಿಲ್ಲ.

ಸಿಗ್ನಲ್ ಶುರುವಾದಾಗಿನಿಂದ ಅವಳ ಪಕ್ಕದಲ್ಲಿ ಎರಡೂ ಸಾಲು ಪುರುಷರೇ ನಿಂತಿದ್ದರು. ಪುರುಷರಾದರೇನಂತೆ ಒಳ್ಳೆಯ ಕೆಲಸ ಮಾಡಲು. ಆ ಹುಡುಗಿಗೆ ಹೇಳಬಹುದಾಗಿತ್ತು ಎಂಬುದು ನನ್ನ ಅನಿಸಿಕೆ.

ನನ್ನ ಸೀರೆಯ ಪಲ್ಲು ಕೂಡಾ ಹೀಗೆಯೇ ಒಂದೆರಡು ಬಾರಿ ತನಗೆ ತಾನೇ ಸ್ವಾತಂತ್ರ್ಯ ಪಡೆದುಕೊಂಡು ದಶದಿಕ್ಕುಗಳನ್ನು ಸುತ್ತುತಿತ್ತು. ನೋಡಿಕೊಂಡ ತಕ್ಷಣ “ಯಪ್ಪಾ ದೇವ್ರೆ, ಗಾಡಿಯ ಚಕ್ರಕ್ಕೆ ಸುತ್ತಿಕೊಂಡುಬಿಟ್ಟಿದ್ದರೆ? ಎಂದುಕೊಂಡು ಸರಿಮಾಡಿಕೊಂಡೆ.

ಪುರುಷಮಹಾಶಯರಾಗಲಿ, ಮಹಿಳಾಮಣಿಗಳೇ ಆಗಲಿ, ಯಾರೇ ಇದ್ದರೂ ಆ ರೀತಿಯ ಸಂದರ್ಭಗಳಲ್ಲಿ ಹೇಳಲು ಪ್ರಯತ್ನಿಸುವುದು ಉತ್ತಮ.

  • ರಶ್ಮಿ ಕೆ. ವಿಶ್ವನಾಥ್

1 thought on “ಕಳಕಳಿ”

Leave a Comment

Your email address will not be published. Required fields are marked *

Scroll to Top