
ಜನವರಿ 2026ಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ “ಪಂಜು” ವೆಬ್ ಪತ್ರಿಕೆಯು ಕಥಾ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ವಿವರಗಳು ಕೆಳಕಂಡಂತಿವೆ.
ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ.
ಸೂಚನೆಗಳು:
– ಕಥೆ ಸ್ವಂತ ರಚನೆಯಾಗಿರಬೇಕು.
– ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.
– ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಫೇಸ್ಭುಕ್ ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
– ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು.
ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com
ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.
ಮಿಂಚಂಚೆಯಲ್ಲಿ ನಿಮ್ಮ ಹೆಸರು, ಫೋಟೋ, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..
ಕಥೆ ತಲುಪಬೇಕಾದ ಕೊನೆಯ ದಿನಾಂಕ: 15.12.2025
ಮೊದಲ ಬಹುಮಾನ: 7000 ರೂಪಾಯಿ
ಎರಡನೇ ಬಹುಮಾನ: 5000 ರೂಪಾಯಿ
ಮೂರನೇ ಬಹುಮಾನ: 3000 ರೂಪಾಯಿ

