ನಾಡಿನ “ಅಕ್ಷರ ಚಪ್ಪರ” – ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಲುವಾಗಿ ಮಕ್ಕಳೇ ಮಕ್ಕಳಿಗಾಗಿ ನಡೆಸಿಕೊಡುವ ಕಾರ್ಯಕ್ರಮ ಒಂದನ್ನು ಆಯೋಜಿಸುತ್ತಾ ಬಂದಿದೆ.

ಇದು ಮಕ್ಕಳಿಂದ ಮಕ್ಕಳಿಗಾಗಿ ಆಯೋಜಿಸಿರುವ ಕಾರ್ಯಕ್ರಮ. ಅವರೇ ನಿರೂಪಕರು, ಅತಿಥಿಗಳು, ಸಂಪನ್ಮೂಲ ವ್ಯಕ್ತಿಗಳು. ಏಕೆಂದರೆ ಇದು ಚಿಣ್ಣರ ಚಪ್ಪರ.
ನಿಮ್ಮ ಮಕ್ಕಳಲ್ಲಿ ಇರುವ ಕೌಶಲ್ಯವನ್ನು ತೋರಿಸಲು ಇದೊಂದು ಉತ್ತಮ ವೇದಿಕೆ.
ಅಲ್ಲದೇ, ಕಲೆ, ಕನ್ನಡ, ಮಾನಸಿಕ ಆರೋಗ್ಯ, ಕನ್ನಡದ ಆಟೋಟ, ಹೀಗೆ ಹಲವು ವಿಭಿನ್ನ ವಿಭಾಗಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುವಂತೆ ಕಾರ್ಯಕ್ರಮ ರೂಪಿಸಲಾಗುತ್ತದೆ.

ಈ ಬಾರಿಯ “ಚಿಣ್ಣರ ಚಪ್ಪರ” ನಮ್ಮ ಕಲ್ಪತರು ನಾಡು ತುಮಕೂರಿನ ಕನ್ನಡ ಭವನದಲ್ಲಿ ದಿನಾಂಕ 22/11/2025ರ ಶನಿವಾರ ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದು ಗಂಟೆಯವರೆಗೆ ಆಯೋಜಿಸಲಾಗುತ್ತಿದ್ದು, ತುಮಕೂರಿನ ಹಾಗೂ ರಾಜ್ಯದ ಎಲ್ಲಾ ಮಕ್ಕಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಇದರ ಸೌಲಭ್ಯ ಪಡೆಯಲು ಮನವಿ.
ನೃತ್ಯ, ಹಾಡುಗಾರಿಕೆ, ಚಿತ್ರ ಬಿಡಿಸುವುದು, ಭಾಷಣ ಇನ್ನು ಇತ್ಯಾದಿ ಅಭಿರುಚಿಗಳು ನಿಮ್ಮ ಮಕ್ಕಳಲ್ಲಿದ್ದರೆ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿ.
ನೋಂದಣಿ ಶುಲ್ಕ : 50 ರೂಗಳು ಮಾತ್ರ
ಕೊನೆಯ ದಿನಾಂಕ : 10/11/2025
ದೂರವಾಣಿ ಸಂಖ್ಯೆ : 6360497877
