
ನಿನ್ನ ಪರಿಶ್ರಮದಿ ಬೆಳ್ಳಿ ತೆರೆಯಲ್ಲಿ ಮೂಡಿಸಿದ್ದೆ ವಿಭಿನ್ನ ಶೈಲಿಯ ಛಾಪು,
ವಯಸೆಷ್ಟೇ ಆಗಿದ್ರೂ ನಮ್ಮೆಲ್ಲರ ಮನದಲ್ಲಿ ನೀನು ಮುಗ್ದ ಮನದ ಅಪ್ಪು
ವಯಸ್ಸಿಗೂ ಮಿಗಿಲಾಗಿತ್ತು, ನಿನ್ನ ಸಾಧನೆ,
ಈಗ ನೀನಿರದ ದಿನಗಳ ನೆನೆದು ಅಭಿಮಾನಿಗಳಲಿ ಸಹಿಸಲಾರದ ವೇದನೆ, ಯಾರು ಕೊಟ್ಟರು ನಿನಗೆ ಸ್ವರ್ಗಕ್ಕೆ ಹೋಗಲು ರಹದಾರಿ?
ಕೇಳುತ್ತಿದ್ದಾರೆ ಕ್ಷಣ ಕ್ಷಣದಲ್ಲೂ ಶುಭ ಹರಸುತ್ತಿದ್ದ ಅಭಿಮಾನಿಗಳು ಪರಿ ಪರಿ.
ರಾಜಕುಮಾರನ ಸಾವನ್ನು ಅರಮನೆಯಲ್ಲಿ ಯಾರು ಒಪ್ಪುತ್ತಿಲ್ಲ ಭಗವಂತ,
ಎಲ್ಲರೂ ಕೈ ಮುಗಿದು ವಿನಂತಿಸುತ್ತಿದ್ದಾರೆ,
ನಮ್ಮ ಅರಸನನ್ನು ಬೇಗ ಕಳಿಸಿಬಿಡಿ ಅಂತ,

ಈ ಪುಣ್ಯ ಪೃಥ್ವಿಯಿಂದ ,
ಆಕಾಶದೆಡೆ ಕರೆದುಕೊಳ್ಳುವಾಗ
ಹಸಿದವರ ಕೂಗು ಅನಾಥರ ಅಳಲು, ಮುಗಿಲು ಮುಟ್ಟಿದ ಆಕ್ರಂದನ, ಕೇಳಲಿಲ್ವ ಲೋಕದ ದೊರೆ?
ಅರಸನ ಅರಮನೆಯಲ್ಲಿ ಕರಾಳ ನೆನಪಿನ ಸೂತಕ ಆರಿಲ್ಲ,
ಬೇಗ ಕಳಿಸಿಬಿಡು ದೊರೆ,
ಅಪ್ಪು ನಮ್ಮ ಕರುನಾಡಿನವರೆ,
ಏ ರಾಜಕುಮಾರ, ಆ ಯಮನಿಗೆ ತೋರಿಸಲಿಲ್ಲವೇಕೆ ನಿನ್ನ ಪವರಿನ ಅವತಾರ,
ಯಾಕೆ ಮೌನಿಯಾದೆ
ಪ್ರೀತಿಯ ವೀರ ಕನ್ನಡಿಗ,
ಏ ಭಗವಂತ ನಿನಗೆ ನಮ್ಮ ಮೌರ್ಯ ಚಕ್ರವರ್ತಿ
ಅಷ್ಟೊಂದು ವೈರಿನಾ? ಕ್ರೂರಿನಾ?
ನೀನೊಮ್ಮೆ ಯೋಚಿಸಿಬಿಡು
ನೀ ಮಾಡಿದ್ದು ಸರೀನಾ?
ಏ ದೇವರೇ,
ಲೋಕಕೆಲ್ಲ ಗೊತ್ತು ನೀನೇಷ್ಟು ಚತುರ,
ಒಳ್ಳೆಯ ಸಹೃದಯಿಗಳನ್ನು
ಕರೆದು ಕೊಳ್ಳುವಾಗ ಇರಲಿ ನ್ಯಾಯದ ಲೆಕ್ಕಾಚಾರ,
ಆಜೀವವನ್ನೇ ನಂಬಿದ ನೊಂದ ಮನಗಳಿಗೆ ಏನೆಂದು ನೀಡಲಿ ಉತ್ತರ
ನೀನೊಮ್ಮೆ ಧರೆಗಿಳಿದು ಸುತ್ತಿಬಿಡು
ಲೋಕ ಸಂಚಾರ,

ಏ ಭಗವಂತ ತುಂಬಾ ಅನ್ಯಾಯ
ಮಾಡಿದೆ ನೀನು,
ಜನರ ಕ್ಷಮೆ ಕೇಳಿ ಕಳಿಸಿಬಿಡಿ
ದಾನ ಶೂರ ಕರ್ಣನನ್ನು,
ಕಸ್ತೂರಿ ನಿವಾಸದ ಮಗುವನ್ನು,
ಕರುನಾಡಿನ ಕಲ್ಪ ವೃಕ್ಷವನ್ನು,
ದೀನ ದಲಿತರ ಕಾಮಧೇನುವನ್ನು
ನಿನ್ನೆಡೆಗೆ ಕರೆದುಕೊಳ್ಳಲು ಅಂತ ಅವಸರವೇನಿತ್ತು ಭಗವಂತ?
ಮತ್ತೊಮ್ಮೆ ಯೋಚಿಸಿ ಕಳಿಸಿಬಿಡು
ನಮ್ಮ ಮನೆ ಮಗನಾದ ಅಪ್ಪುನನ್ನು,
ಬೇಗ ಕಳಿಸಿಬಿಡು ದೇವ ನಿನ್ನ ವಶದಲ್ಲಿರುವ ವಂಶಿಯನ್ನು…
- ಎಸ್ ಪರಶುರಾಮಪ್ಪ, ತಂದೆ ಶಂಕರಪ್ಪ ಪೊಲೀಸ್ ಇಲಾಖೆ
8 ನೇ ಪಡೆ ಕೆ ಎಸ್ ಆರ್ ಪಿ
ಪೊಲೀಸ್ ವಸತಿ ಗೃಹ
ಮಾಚೇನಹಳ್ಳಿ ನಿಧಿಗೆ ಅಂಚೆ ಶಿವಮೊಗ್ಗ ಜಿಲ್ಲೆ – 577 222
ಮೊಬೈಲ್: 94481 16316.
