
“ಹಂಸ” ಪ್ರತಿಷ್ಠಾನದಿಂದ ಕೊಡಮಾಡುವ 2ನೇ ವರ್ಷದ “ಹಂಸಕಥಾ” ಪುರಸ್ಕಾರಕ್ಕೆ 2025ನೇ ಸಾಲಿನಲ್ಲಿ ಪ್ರಕಟಗೊಂಡ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ ಅನುವಾದಿತ ಕಥಾ ಸಂಕಲನಗಳಿಗೆ ಅವಕಾಶವಿರುವುದಿಲ್ಲ. ಪ್ರಶಸ್ತಿಯು 5000 ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ನಿಯಮಗಳು
- 2025 ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕಥಾ ಸಂಕಲನದ 3 ಪ್ರತಿಗಳನ್ನು ಕಳುಹಿಸುವುದು.
- ಕೃತಿಯು ಪ್ರಥಮ ಮುದ್ರಣವಾಗಿರಬೇಕು.
- ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ
ಕಥಾ ಸಂಕಲನ ಕಳಿಸುವ ಕೊನೆಯ ದಿನಾಂಕ :01-03-2026
ಕೃತಿಗಳನ್ನು ಕಳಿಸಬೇಕಾದ ವಿಳಾಸ :
ಬಸವರಾಜ್ ಜಾಡರ್, ಸಂಚಾಲಕರು, ಹಂಸ ಪ್ರತಿಷ್ಠಾನ,
ತಾಲೂಕ ಪಂಚಾಯತ್ ಎದುರುಗಡೆ ರೋಡ್, ಶಿವಾಜಿ ಸರ್ಕಲ್,
ರಟ್ಟೀಹಳ್ಳಿ, ತಾ| ರಟ್ಟೀಹಳ್ಳಿ, ಜಿ| ಹಾವೇರಿ. ಪಿನ್ – 581 116
ಮೊಬೈಲ್ ನಂ: 8095362060 / 9742397104
