
ಚಿತ್ರ ಕೃಪೆ: istock
ಹೋರಾಟದ ಕಿಡಿಯನ್ನು
ಎದೆಯಲ್ಲಿ ಹೊತ್ತು ನಡೆದಿದ್ದೇವೆ
ಎಲ್ಲವನ್ನೂ ಧಿಕ್ಕರಿಸಿ ದಿಟ್ಟೆಯರಾಗಿ
ಕಣ್ಣುಗಳ ದೀಪದಲ್ಲಿ ಜ್ವಾಲೆ ತುಂಬಿ
ನಿಮ್ಮೆದೆಗಳಲ್ಲಿ ಬೆಳಕ ಚೆಲ್ಲುತ್ತೇವೆ
ಹೆಜ್ಜೆ ಹೆಜ್ಜೆಯಲ್ಲಿ ಹೂತುಹಾಕಿದ
ಹೆಣ್ಣುಗಳ ಆತ್ಮಗಳು ನಿಮ್ಮೆದೆಯ
ಬಗೆದು ಕ್ರೌರ್ಯವನು ಹೊರ ಹಾಕಿ
ಕರುಣೆ ಬೆಳಗಿಸಲು ಬಂದಿದ್ದೇವೆ
ನಾವು ಕೇವಲ ಹೆಣ್ಣುಗಳಲ್ಲ
ಶತ ಶತಮಾನಗಳ ಪಾಪಕೂಪದ
ಪಾತಕಿಗಳ ಬಯಲಿಗೆಳೆಯಲು
ಬಂದಿರುವ ಅನಾತ್ಮಗಳು
ಪಾಪಾತ್ಮರೆ ಪರಿತಪಿಸಿ ಎಚ್ಚೆತ್ತು ಕೊಳ್ಳಿ ಪ್ರಾಯಃಶ್ಚಿತ್ತಗೊಂಡು
ಎದೆಯಾoತರಾಳದಿಂದ ಹೇಳಿ
ಕೊoದವರು ಯಾರು?
ಕೊoದವರು ಯಾರು?
ನಿಜಹೇಳಿ ಪಾಪ ಕೂಪದಿಂದ ಹೊರ ಬನ್ನಿ.
- ಬಾ. ಹ. ರಮಾಕುಮಾರಿ, ಹಿರಿಯ ಕವಯತ್ರಿ, ತುಮಕೂರು.

ಧನ್ಯವಾದಗಳು ಸತೀಶ್
ನಿಮ್ಮ ಈ ಕಾರ್ಯಕ್ಷೇತ್ರ ದಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿ.