
ಪೂರ್ಣಿಮಾ ಅಂತಾ ಒಬ್ಬ ಹುಡುಗಿ ಇದ್ದಳು ಪ್ರೀತಿಯಿಂದ ಎಲ್ಲರೂ
ಅವಳನ್ನು ‘ಪೂರಿ’ ಪೂರಿ ಎಂದು ಕರೆಯುತ್ತಿದ್ದರು.
ಒಂದು ದಿನ ಅಚಾನಕ್ ಆಗಿ ನೀರಿಗೆ ಬಿದ್ದಳು. ಆಗ ನೀರಿನಲ್ಲಿ ಬಿದ್ದದ್ದಕ್ಕೆ
ಅವಳಿಗೆ “ಪಾನಿ ಪೂರಿ” ಅಂತ ಕರೆದರು.
ನೀರಿನಲ್ಲಿ ಬಿದ್ದದ್ದನ್ನು ನೋಡಿದವರು ಅವಳನ್ನು ರಕ್ಷಿಸಿ ರಕ್ಷಿಸಿ ಅನ್ನೋದನ್ನು ಇಂಗ್ಲೀಷನಲ್ಲಿ “ಸೇವ್ ಪೂರಿ” ಸೇವ್ ಪೂರಿ ಎಂದು ಕೂಗುತ್ತಿದ್ದರು.
ಆಗ ಆಕೆಯೇ “ಸೇವ್ ಪೂರಿ” ಆದಳು.
ಈಜು ಬಲ್ಲವರು ಧುಮುಕಿ ರಕ್ಷಿಸಿದರು. ಪೋಲಿಸರು ಬಂದು ಆತ್ಮಹತ್ಯೆ ಯತ್ನ ಎಂದು ಕೇಸ್ ದಾಖಲಿಸಿಕೊಂಡರು. ಆದರೆ ನ್ಯಾಯಾಲಯ ಆಕೆಗೆ ಬೇಲ್ ನೀಡಿತು.
ಆಗ ಆಕೆಗೆ ”ಬೇಲ್ ಪೂರಿ” ಅಂತ ಕರೆಯತೊಡಗಿದರು.
ಮಾಧ್ಯಮಗಳು ಇದನ್ನೇ ಹಿಡಿದು ಕೊಂಡು ವಾರಗಟ್ಟಲೇ ರುಬ್ಬುತ್ತಾ ಅವಳಿಗೆ ಆ ಸಂಬಂಧವಿತ್ತು, ಈ ಸಂಬಂಧವಿತ್ತು. ಹೀಗೆ ಹಾಗೆ ಎಂದು ಮಸಾಲೆ ಹಚ್ಚಿ ಕೊರೆದವು.
ಆಗ ಆಕೆಗೆ “ಮಸಾಲ ಪೂರಿ” ಅಂತಾ ಕರೆದರು.
ಆಕೆಯ ಎಲ್ಲ ಘಟನೆಗಳ ನೆನಪಿಗಾಗಿ ಪೂರಿˌ ಪಾನಿ ಪೂರಿˌ ಭೇಲ್ ಪೂರಿˌ ಮಸಾಲಾ ಪೂರಿˌ ಸೇವ್ ಪೂರಿಗಳು ಜಾರಿಗೆ ಬಂದವು.
🙂 (ಸಂಗ್ರಹ)
