
೨೦೨೫ ನೇ ಸಾಲಿನ” ಸೃಷ್ಟಿ ಕಾವ್ಯ ಪುರಸ್ಕಾರ”ಕ್ಕೆ ಕವನ ಸಂಕಲನಗಳ ಆಹ್ವಾನ… (೫ ನೇ ವರ್ಷದ ಪ್ರಕಟಣೆ)
ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ ‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ೨೦೨೫ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.
ಪ್ರಶಸ್ತಿಯು ೫೦೦೦ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ನಿಯಮಗಳು:-
- ೨೦೨೫ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು.
- ಕೃತಿಯ ಪ್ರಥಮ ಮುದ್ರಣವಾಗಿರಬೇಕು.
- ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.
- ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೩೧ / ೧೨/ ೨೦೨೫
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಅಶೋಕ ಹೊಸಮನಿ
ಸಂಚಾಲಕರು,
ಸೃಷ್ಟಿ ಕಾವ್ಯ ಪುರಸ್ಕಾರ
ಜೆ.ಪಿ.ನಗರ ಕಾರಟಗಿ
ಸಾ| ತಾ| ಕಾರಟಗಿ – ೫೮೩೨೨೯
ಜಿ| ಕೊಪ್ಪಳ
ಮೊ: ೮೮೮೪೧೫೬೫೦೦
