13ನೇ ವಾರ್ಷಿಕೋತ್ಸವಕ್ಕೆ ಕಥಾ ಸ್ಪರ್ಧೆ…

ಜನವರಿ 2026ಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ “ಪಂಜು” ವೆಬ್‌ ಪತ್ರಿಕೆಯು ಕಥಾ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ವಿವರಗಳು ಕೆಳಕಂಡಂತಿವೆ.

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ.

ಸೂಚನೆಗಳು:
– ಕಥೆ ಸ್ವಂತ ರಚನೆಯಾಗಿರಬೇಕು.
– ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.
– ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಫೇಸ್ಭುಕ್‌ ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
– ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು.

ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com

ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.

ಮಿಂಚಂಚೆಯಲ್ಲಿ ನಿಮ್ಮ ಹೆಸರು, ಫೋಟೋ, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..

ಕಥೆ ತಲುಪಬೇಕಾದ ಕೊನೆಯ ದಿನಾಂಕ: 15.12.2025

ಮೊದಲ ಬಹುಮಾನ: 7000 ರೂಪಾಯಿ

ಎರಡನೇ ಬಹುಮಾನ: 5000 ರೂಪಾಯಿ

ಮೂರನೇ ಬಹುಮಾನ: 3000 ರೂಪಾಯಿ

Leave a Comment

Your email address will not be published. Required fields are marked *

Scroll to Top