ಕವಿತೆ: ನಗುವನಯ್ಯ ನನ್ನ ದೈವ

ನಗುವನಯ್ಯ ನನ್ನ ದೈವ ನಗುವನಯ್ಯ ನನ್ನ ದೈವ
ನಕ್ಕು ನಗಿಸಿ… ನಗಿಸಿ ನಕ್ಕು ನಲಿವನ್ನ ಕೊಡುವನಯ್ಯ

ಅಳುವನಯ್ಯ ನನ್ನ ದೈವ ಅಳುವನಯ್ಯ ನನ್ನ ದೈವ
ಅತ್ತು ಅಳಿಸಿ… ಅಳಿಸಿ ಅತ್ತು ಅಳುವನ್ನ ಅಳಿಸುವನಯ್ಯ

ಮೂಕನಯ್ಯ ನನ್ನ ದೈವ ಮೂಕನಯ್ಯ ನನ್ನ ದೈವ
ಮೂಕ ಜೀವಿಗೂ ಮೌನ ಜೀವಿಗೂ ಮೌನಿಯೇ ಆದನಯ್ಯ

ಕುರುಡು, ಕುಂಟ, ಹೆಳವ ನನ್ನ ದೈವ ಕುರಿ, ಕೋಳಿ, ಎಮ್ಮೆ ನನ್ನ ದೈವ
ಅವರವರು ಇದ್ದಂತೆ ಅವರ ಮನದ ರೂಪದಂತೆ ಕಾಣಿಸುವನಯ್ಯ

ಪ್ರಾಣಿ, ಪಕ್ಷಿ, ಕ್ರಿಮಿ-ಕೀಟ ನನ್ನ ದೈವ ಅಗ್ನಿ ವಾಯು ವರುಣ ನನ್ನ ದೈವ
ಸಕಲ ಚರಾ ಚರ ವಸ್ತುಗಳಲ್ಲಿ ಅವನೇ ಇರುವನಯ್ಯ

ಆಕಾರ ನಿರಾಕಾರ ನಿರ್ಗುಣ ನನ್ನ ದೈವ ಸರ್ವಜ್ಞ ಸರ್ವಶಕ್ತ ನನ್ನ ದೈವ
ಜಗದ ಸೃಷ್ಟಿ ಸ್ಥಿತಿ ಲಯಕ್ಕೆ ಅವನೇ ಕಾರಣಭೂತ ನಯ್ಯ

ಅಣು ಅಣು ವಿನಲ್ಲೂ ಅವನೇ ಇರುವನಯ್ಯ
ನಿನ್ನೊಳು ಇರುವ ಅವನನ್ನ ನೀ ಮೊದಲು ಕಾಣಬೇಕಯ್ಯ

  • ವಿಧಿ ಗರ್ಭ ಸಂಜಾತ

Leave a Comment

Your email address will not be published. Required fields are marked *

Scroll to Top