ಜಪಾನಿನ ಹಿರಿಯರ ಬದುಕಿನ 44 ರಹಸ್ಯಗಳು…

ಜಪಾನಿನ ಮಾನಸಿಕ ತಜ್ಞ ಡಾ. ಹಿಡೇಕೆ ವಾಡ ಅವರು” 80 ವರ್ಷದ ಹಳೆಯ ಗೋಡೆ “ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದನ್ನು ಪ್ರಕಟಿಸಿದ ಕೂಡಲೇ 5 ಲಕ್ಷ ಪ್ರತಿಗಳು ಮಾರಾಟವಾದವು. ಅದು ಆ ವರ್ಷದ ಅತ್ಯುತ್ತಮ, ಅತಿ ಹೆಚ್ಚು ಮಾರಾಟವಾದ ಪುಸ್ತಕವೆಂದು ಪರಿಗಣಿಸಲಾಯಿತು. ಇದೇ ರೀತಿ ಮುಂದುವರೆದರೆ ಆ ಪುಸ್ತಕ ಒಂದು ದಶಲಕ್ಷ ಪ್ರತಿಗಳು ಮಾರಾಟವಾಗಿ, ಜಪಾನಿನ ವರ್ಷದ ಅತಿ ಹೆಚ್ಚು ಮಾರಾಟವಾದ ಪುಸ್ತಕವೆಂದು ದಾಖಲೆಯಾಗಬಹುದು.

ಡಾ. ವಾಡ ಅವರಿಗೆ 61 ವರ್ಷ. ಹಿರಿಯರ ಮಾನಸಿಕ ಸಮಸ್ಯೆಗಳ ಬಗೆಗೆ ವಿಶೇಷ ಅಭ್ಯಾಸ ಮಾಡಿದ ತಜ್ಞರು. ”80 ವರ್ಷದ ಅದೃಷ್ಟವಂತರ” ಬದುಕಿನ ರಹಸ್ಯಗಳನ್ನು (ಗುಟ್ಟುಗಳನ್ನು) ಕೇವಲ 44 ವಾಕ್ಯಗಳಲ್ಲಿ ಈ ಕೆಳಗಿನಂತೆ ಪಟ್ಟಿಮಾಡಿ ನಮಗಾಗಿ ಇಟ್ಟಿದ್ದಾರೆ.

  1. ನಡೆಯುವುದನ್ನು (ವಾಕಿಂಗ್) ನಿರಂತರವಾಗಿ ಇಟ್ಟುಕೊಳ್ಳಿ.
  2. ನಿಮಗೆ ಕೋಪ ಬಂದಾಗ ದೀರ್ಘವಾಗಿ ಉಸಿರಾಟವನ್ನು ಮಾಡಿ.
  3. ವ್ಯಾಯಾಮ ಮಾಡಿರಿ. ನಿಮ್ಮ ದೇಹ ಮಣಿಯುವಂತೆ ಇಟ್ಟುಕೊಳ್ಳಿ. ಸ್ಟೀಫ್ ನೆಸ್ ಬರಬಾರದು.
  4. ಹವಾ ನಿಯಂತ್ರಿತ ವ್ಯವಸ್ಥೆಯನ್ನು ಬೇಸಿಗೆಯಲ್ಲಿ ನೀವು ಉಪಯೋಗಿಸುತ್ತಿದ್ದರೆ ಹೆಚ್ಚಿಗೆ ನೀರು ಕುಡಿಯಿರಿ.
  5. ಡೈಪರ್ ಉಪಯೋಗಿಸುವುದು ನಿಮ್ಮನ್ನು ಹೆಚ್ಚು ಚಲನಶೀಲರಾಗಿ ಇಡುತ್ತದೆ
  6. ಹೆಚ್ಚು ಹೆಚ್ಚು ಜಗಿದು ತಿನ್ನುವುದು ನಿಮ್ಮ ಮೆದುಳು ಮತ್ತು ದೇಹವನ್ನು ಹೆಚ್ಚು ಕ್ರಿಯಾಶೀಲವಾಗಿ ಇಡುತ್ತದೆ.
  7. ನೆನಪಿನ ಶಕ್ತಿ ಕಡಿಮೆಯಾಗುವುದು ವಯಸ್ಸಿನಿಂದಲ್ಲ. ಮೆದುಳು ಹೆಚ್ಚು ಉಪಯೋಗಿಸದೆ ಇರುವುದರಿಂದ ನೆನಪಿನ ಶಕ್ತಿ ಕಡಿಮೆಯಾಗುತ್ತದೆ.
  8. ಅತಿಯಾದ ಔಷಧ ಸೇವನೆ ದೇಹಕ್ಕೆ ಅವಶ್ಯವಿರುವುದಿಲ್ಲ.
  9. ಅನವಶ್ಯಕವಾಗಿ ರಕ್ತದ ಒತ್ತಡವನ್ನು ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಡಿ.
  10. ಒಂಟಿಯಾಗಿ ಇರುವುದು ಏಕಾಂಗಿತನವಲ್ಲ.ಅದು ವೇಳೆಯನ್ನು ಶಾಂತವಾಗಿ ಕಳೆಯುವ ರೀತಿ.
  11. ಸೋಮಾರಿತನದ ಬಗೆಗೆ ನಾಚಿಕೆ ಪಟ್ಟುಕೊಳ್ಳುವಂತದ್ದು ಏನು ಇಲ್ಲ.
  12. ವಾಹನ ಚಾಲನೆ ಮಾಡುವುದನ್ನು ಅಗತ್ಯವಿದ್ದಾಗ ತುಂಬಾ ಜಾಗರೂಕತೆಯಿಂದ ಮಾಡಿ (ಇಂದಿನ ಭಾರತದ ವಾತಾವರಣದಲ್ಲಿ)
  13. ನಿಮಗೆ ಇಷ್ಟವಿದ್ದನ್ನು ಮಾಡಿ ಇಷ್ಟವಿಲ್ಲದೆ ಇರುವುದನ್ನು ಮಾಡಬೇಡಿ.
  14. ನೈಸರ್ಗಿಕ ಆಸೆಗಳು ವೃದ್ಧಾಪ್ಯದಲ್ಲಿ ಇರಬಹುದು.
  15. ಎಲ್ಲ ವೇಳೆಯಲ್ಲಿಯೂ ಮನೆಯಲ್ಲಿ ಕುಳಿತುಕೊಳ್ಳುವುದನ್ನು ರೂಢಿಸಿಕೊಳ್ಳಬೇಡಿ.
  16. ಏನು ಮೆಚ್ಚುಗೆ ಯಾಗುತ್ತದೆಯೋ ಅದನ್ನು ತಿನ್ನಿ ನೀವು ಸ್ವಲ್ಪ ದಪ್ಪಗಾದರೂ ಒಳ್ಳೆಯದೇ.
  17. ಯಾವುದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ.
  18. ನೀವು ಮೆಚ್ಚದೆ ಇರುವವರ ಜೊತೆ ನೀವು ಕೂಡಿಕೊಂಡು ಇರುವುದು ಬೇಡ.
  19. ಎಲ್ಲ ವೇಳೆಯಲ್ಲಿಯೂ ಟಿವಿ ನೋಡಬೇಡಿ.
  20. ಅನಾರೋಗ್ಯದ ಜೊತೆ ಹೋರಾಟ ಮಾಡುವುದರ ಬದಲಾಗಿ ಅದರ ಜೊತೆ ಬದುಕುವುದನ್ನು ಕಲಿಯಿರಿ.
  21. ಕಾರು ಬೆಟ್ಟ ಹತ್ತಿದ ಮೇಲೆ ಮುಂದಿನ ದಾರಿ ಕಾಣುತ್ತದೆ…ಎನ್ನುವ ಉಕ್ತಿ ಹಿರಿಯರಲ್ಲಿಯ ಸಂತೋಷಕ್ಕೂ ಅನ್ವಯಿಸುತ್ತದೆ
  22. ತಾಜಾ ಹಣ್ಣು ಮತ್ತು ಮಿಶ್ರ ತರಕಾರಿಗಳನ್ನು ತಿನ್ನಿರಿ.
  23. 10 ನಿಮಿಷಕ್ಕೂ ಹೆಚ್ಚು ಕಾಲ ಸ್ನಾನ ಮಾಡಲು ತೆಗೆದುಕೊಳ್ಳಬೇಡಿ.
  24. ನಿಮಗೆ ನಿದ್ರೆ ಬರದೇ ಇದ್ದರೆ ಒತ್ತಾಯ ಮಾಡಿ ನಿದ್ದೆ ಮಾಡುವುದು ಬೇಡ.
  25. ನಿಮಗೆ ಸಂತೋಷ ತರುವ ಚಟುವಟಿಕೆಗಳು ನಿಮ್ಮ ಮೆದುಳನ್ನು ಹೆಚ್ಚು ಚಟುವಟಿಕೆ (ಚುರುಕು) ಗೊಳಿಸುತ್ತವೆ.
  26. ನಿಮಗೆ ಅನಿಸಿದ್ದನ್ನು ಹೇಳಿ. ಅನಾವಶ್ಯಕವಾಗಿ ಹೆಚ್ಚು ಚಿಂತೆ ಮಾಡಬೇಡಿ.
  27. ಸಾಧ್ಯವಾದಷ್ಟು ಬೇಗ ಒಬ್ಬ “ಕುಟುಂಬ ವೈದ್ಯರನ್ನು” ಗುರುತಿಸಿಕೊಳ್ಳಿ.
  28. ಹೊರಗೆ ಶಾಂತವಾಗಿರುವಂತೆ ಅಥವಾ ಒತ್ತಾಯದಿಂದಾಗಿ ಶಾಂತವಾಗಿರುವುದು ಬೇಡ. ಮನ ಬಿಚ್ಚಿ ಮಾತನಾಡುವುದು ಹಿರಿಯರಲ್ಲಿ ತಪ್ಪಲ್ಲ.
  29. ಕೆಲವೊಂದು ಸಲ ನಿಮ್ಮ ಮನಸ್ಸನ್ನು ಬದಲಿಸಿಕೊಳ್ಳುವುದು ಒಳ್ಳೆಯದು.
  30. ಜೀವನದ ಕೊನೆ ಹಂತದಲ್ಲಿ ಮರಗುಳಿತನ ಅಥವಾ ಸ್ಮರಣಶಕ್ತಿಯ ಕುಂದುವಿಕೆ ದೇವರು ಕೊಟ್ಟು ವರ.
  31. ನೀವು ಜೀವನದಲ್ಲಿ ಕಲಿಯುವುದನ್ನು ನಿಲ್ಲಿಸಿದರೆ ನೀವು ಬೇಗ ವೃದ್ಧರಾಗುತ್ತೀರಿ.
  32. ಜನಪ್ರಿಯತೆಗೆ ಹಂಬಲಿಸಬೇಡಿ ಇರುವದರಲ್ಲಿ ನೆಮ್ಮದಿ ಪಡೆದುಕೊಳ್ಳಿ.
  33. ಮುಗ್ಧತೆ ಎನ್ನುವದು ಹಿರಿಯರಿಗೆ ಭೂಷಣ.
  34. ಯಾವುದು ಹೆಚ್ಚು ಕಷ್ಟಕರವಾಗಿದೆಯೋ ಅದು ನಂತರ ಹೆಚ್ಚು ಆಸಕ್ತಿಯುಳ್ಳದ್ದಾಗುತ್ತದೆ.
  35. ಸೂರ್ಯನ ಎಳೆ ಬಿಸಿಲಿನ ಸ್ನಾನ ಹರುಷ ತರುತ್ತದೆ.
  36. ಬೇರೆಯವರಿಗೆ ಅನುಕೂಲ ಅಥವಾ ಒಳಿತಾಗುವ ಕೆಲಸಗಳನ್ನು ಮಾಡಿರಿ.
  37. ಇಂದಿನ ದಿನವನ್ನು ಆರಾಮವಾಗಿ ಕಳೆಯಿರಿ.
  38. ಅಪೇಕ್ಷೆ ಎನ್ನುವುದು ದೀರ್ಘಾಯುಷ್ಯದ ಕೀಲಿಕೈ.
  39. ಸಂತೋಷದಿಂದ ಬದುಕಿರಿ.
  40. ಸರಳವಾಗಿ ದೀರ್ಘವಾಗಿ ಉಸಿರಾಡಿರಿ.
  41. ನಿಮ್ಮ ಜೀವನದ ಸಿದ್ಧಾಂತಗಳು ನಿಮ್ಮ ಕೈ ಯಲ್ಲಿಯೇ ಇವೆ.
  42. ಪ್ರತಿಯೊಂದನ್ನು ಶಾಂತ ರೀತಿಯಿಂದ ಸ್ವೀಕರಿಸಿರಿ.
  43. ಸಂತೋಷದಿಂದ ಇರುವ ಜನರನ್ನು ಎಲ್ಲರೂ ಪ್ರೀತಿಸುತ್ತಾರೆ.
  44. ಒಂದು ಮುಗುಳು ನಗು ನಿಮಗೆ ಅದೃಷ್ಟವನ್ನು ತರುತ್ತದೆ.

ವಯಸ್ಸು ಆಗುವುದು ಒಂದು ಮಿತಿಯಲ್ಲ. ಅದೊಂದು ಕಾಣಿಕೆ. ಬದುಕಿನ ಬಗೆಗೆ ಒಳ್ಳೆಯ ದೃಷ್ಟಿಕೋನ ಮತ್ತು ದಿನನಿತ್ಯದ ಒಳ್ಳೆಯ ಅಭ್ಯಾಸಗಳಿಂದ 60ರ ನಂತರದ ನಿಮ್ಮ ಆಯುಷ್ಯದ ವರ್ಷಗಳು ಹೆಚ್ಚು ಫಲಪ್ರದವಾಗುತ್ತವೆ.

ವಯಸ್ಸಾಗುವುದನ್ನು ಭಯವಿಲ್ಲದೆ ಸ್ವೀಕರಿಸೋಣ. ಅದರೊಂದಿಗೆ ಗಾಂಭೀರ್ಯ, ಕೃತಜ್ಞತೆ ಮತ್ತು ವಿವೇಕವಿರಲಿ ಎಂದು ಡಾ ವಾಡ ಅವರು ತಿಳಿಸುತ್ತಾರೆ.

  • ಜಿ ಕೆ ಕುಲಕರ್ಣಿ
    ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ
    ನಾಲ್ಕನೇ ಅಡ್ಡರಸ್ತೆ. ”ಆದ್ಯತೆ ನಿಲಯ”
    ಆಂಜನೇಯ ಬಡಾವಣೆ, ದಾವಣಗೆರೆ – 577 004
    ಮೊಬೈಲ್ – 94482 50456.

1 thought on “ಜಪಾನಿನ ಹಿರಿಯರ ಬದುಕಿನ 44 ರಹಸ್ಯಗಳು…”

Leave a Comment

Your email address will not be published. Required fields are marked *

Scroll to Top