ಪ್ರಿಯ ಸ್ನೇಹಿತರೇ, ನಮಸ್ಕಾರ.
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು…
ಹಲವು ವರ್ಷಗಳ ಬರವಣಿಗೆ ಮತ್ತು ಪ್ರಕಾಶನದ ಅನುಭವದ ಆಧಾರದ ಮೇಲೆ ಗುಬ್ಬಚ್ಚಿ ಸತೀಶ್ ಆದ ನಾನು ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದು ಅದರ ಹೆಸರೇ “ಹಾಯ್ ತುಮಕೂರು” ವೆಬ್ ಪತ್ರಿಕೆ. ಈ ನನ್ನ ಸಾಹಸದ ಜೊತೆಯಲ್ಲಿ ಸದಾ ನೀವಿರಬೇಕು.

“ಹಾಯ್ ತುಮಕೂರು” ವೆಬ್ ಪತ್ರಿಕೆಯು ಹೆಸರಿನಲ್ಲಿ ತುಮಕೂರು ಇದ್ದರೂ ಟ್ಯಾಗ್ ಲೈನ್ ʼತನು ಕನ್ನಡ, ಮನ ಕನ್ನಡʼದಂತೆ ಇಡೀ ಕನ್ನಡ ನಾಡಿನ ವ್ಯಾಪ್ತಿಗೆ ಒಳಪಡುತ್ತದೆ. ಕನ್ನಡ ಭಾಷೆಗೆ ಎಷ್ಟು ಆಳ, ಅಗಲ, ಎತ್ತರವಿದೆಯೋ ಅಷ್ಟೂ ವ್ಯಾಪ್ತಿಗೆ ಈ ವೆಬ್ ಪತ್ರಿಕೆಯನ್ನು ವಿಸ್ತರಿಸುವ ಕನಸಿದೆ. ನಾಡಿನ, ಜಗತ್ತಿನ ಯಾವ ಮೂಲೆಯಲ್ಲಿ ನೀವು ಇದ್ದರೂ ಈ ಪತ್ರಿಕೆಯನ್ನು ಓದಬಹುದು ಮತ್ತು ಬರೆಯಬಹುದು. ಪ್ರಮುಖವಾಗಿ ನಾಡಿನ ಇತಿಹಾಸ, ಓದಬೇಕಾದ ಪುಸ್ತಕಗಳು, ನೋಡಬೇಕಾದ ಸಿನಿಮಾಗಳ ಬಗ್ಗೆ ಬರೆಯಿರಿ. ಗುಬ್ಬಚ್ಚಿ ಸತೀಶ್ ಆದ ನಾನು ಸಂಪಾದಕನಾಗಿ ಮತ್ತು ಲೇಖಕನಾಗಿ ನಿಮ್ಮ ಜೊತೆ ಇರುತ್ತೇನೆ. ಪತ್ರಿಕೆಗೆ ಜಾಹೀರಾತು ನೀಡಲು ಇಚ್ಛಿಸುವವರು ಕೂಡ ನನ್ನನ್ನು ಸಂಪರ್ಕಿಸಬಹುದು. ನನ್ನ ವಾಟ್ಸಪ್: 9986692342. ಈ ಮೈಲ್: sathishgbb@gmail.com
ಸ್ನೇಹದಿಂದ,
- ಗುಬ್ಬಚ್ಚಿ ಸತೀಶ್.